ಹುಬ್ಬಳ್ಳಿ: ಯುವಕರಲ್ಲಿ ಐಕ್ಯತೆ, ಏಕತೆ ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಚಿಸಲಾದ ಕನ್ನಡ ಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇಶಪಾಂಡೆ ನಗರದ ಐಬಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾಗಿ ಶುಭಂ ಗಡೇಪ್ಪ, ಉಪಾಧ್ಯಕ್ಷರಾಗಿ ವಿನೋದ್ ಬೋಜಗಾರ ಪದಗ್ರಹಣ ಮಾಡಿದರು.
ಸದಸ್ಯರಾಗಿ ಅಭಿಷೇಕ, ಮನೋಜ್, ರಾಕೇಶ್, ಆಕಾಶ, ಸಾಗರ, ಸಂತೋಷ, ಯಮನೂರಿ ಹಾಗೂ ವಿನೋದ್ ಅವರು ಜವಾಬ್ದಾರಿ ಸ್ವೀಕರಿಸಿದರು.
ನೂತನ ಪದಾಧಿಕಾರಿಗಳು ಯುವಕರನ್ನು ಸಂಘಟಿಸಿ, ಕನ್ನಡ ಭಾಷೆ ಹಾಗೂ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.




