spot_img
Thursday, September 17, 2026
28.1 C
Hubballi

ಕುಂದಗೋಳ : ವಿಷಪೂರಿತ ಆಹಾರ ಸೇವಿಸಿ 20 ಕುರಿ ಸಾವು ! ಕುರಿಗಾಹಿಗಳ ಗೋಳಾಟ

ಕುಂದಗೋಳ : ತಾಲ್ಲೂಕಿನ ದೇವನೂರು ಹಾಗೂ ಕುಂದಗೋಳ ಮಾರ್ಗ ಮಧ್ಯದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ 20 ಕುರಿಗಳು ವಿಷಕಾರಿ ಪದಾರ್ಥ ಸೇವಿಸಿ ಶನಿವಾರ ದುರಂತವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಹೌದು ! ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮುದುಗಲ್ ಗ್ರಾಮದ ಮೂಲದ ಕುರಿಗಾಹಿ ಹನುಮವ್ವ ಗೊಲ್ಲರ ಅವರಿಗೆ ಸೇರಿದ ಕುರಿಗಳು ಇದಾಗಿದ್ದು, ಜೀವನೋಪಾಯಕ್ಕೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡು ಮಾಲಕಿ ಕಣ್ಣೀರಿಡುತ್ತಿದ್ದಾರೆ.

ತಮ್ಮ ಬಳಿ ಇದ್ದ ಒಟ್ಟು 150 ಕುರಿಗಳ ಪೈಕಿ 20 ಕುರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿರುವುದರಿಂದ ಅಂದಾಜು 3 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಈ ಅನಿರೀಕ್ಷಿತ ದುರಂತದಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜೀವನೋಪಾಯ ಕಳೆದುಕೊಂಡಿರುವ ತಮಗೆ ಸರ್ಕಾರದಿಂದ ತಕ್ಷಣದ ಆರ್ಥಿಕ ನೆರವು ದೊರೆಯಬೇಕೆಂದು ಸಂತ್ರಸ್ತ ಕುರಿಗಾಹಿ ಹನುಮವ್ವ ಅವರು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಹನುಮಂತಗೌಡ ಪಾಟೀಲ್ ಅವರು ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ವೈದ್ಯಾಧಿಕಾರಿಗಳು, ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಲಾಗುವುದು.

ಸರ್ಕಾರದ ನಿಯಮಾವಳಿ ಹಾಗೂ ಪರಿಹಾರ ಯೋಜನೆಯಡಿ ಪ್ರತಿ ಮೃತ ಕುರಿಗೆ ತಲಾ 7,500 ರೂಪಾಯಿಗಳಂತೆ ಆರ್ಥಿಕ ಸಹಾಯಧನ ಸಿಗಲಿದ್ದು, ಸಂತ್ರಸ್ತ ಕುಟುಂಬಕ್ಕೆ ಶೀಘ್ರವಾಗಿ ಪರಿಹಾರ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!