ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ 80ರ ದಶಕದ ವಿಂಟೇಜ್ ಲುಕ್‌ನಲ್ಲಿ ಫೋಟೋ ಕ್ರಿಯೇಟ್ ಮಾಡಿಕೊಳ್ಳುವ ಟ್ರೆಂಡ್ ಭಾರೀ ವೈರಲ್ ಆಗಿದೆ. AI ತಂತ್ರಜ್ಞಾನ ಬಳಸಿ ತಮ್ಮ ಫೋಟೋಗಳನ್ನು ಹಳೆಯ ಕಾಲದ ಪೋಸ್ಟರ್, ವಿಂಟೇಜ್ ಕ್ಯಾಮೆರಾ ಫಿಲ್ಮ್ ಹಾಗೂ ರೆಟ್ರೋ ಸ್ಟೈಲ್‌ಗೆ ಬದಲಾಯಿಸಿಕೊಂಡು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಈ ಟ್ರೆಂಡ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. AI ಆ್ಯಪ್‌ಗಳಿಗೆ ವೈಯಕ್ತಿಕ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮುನ್ನ ಅದರ ಸುರಕ್ಷತೆ ಹಾಗೂ ಗೌಪ್ಯತಾ ನೀತಿಯನ್ನು ಪರಿಶೀಲಿಸಬೇಕು ಎಂದು ಸೈಬರ್ ಎಕ್ಸ್‌ಪರ್ಟ್ ಡಾ. ಶುಭಮಂಗಳ ಹೇಳಿದ್ದಾರೆ.
ನಾವು ಅಪ್‌ಲೋಡ್ ಮಾಡುವ ಮೂಲ ಫೋಟೋಗಳು ತಪ್ಪು ಕೈಗಳಿಗೆ ಸಿಕ್ಕರೆ ಅವುಗಳನ್ನು ಡೀಪ್‌ಫೇಕ್ ಸೇರಿದಂತೆ ವಿವಿಧ ರೀತಿಯ ಸೈಬರ್ ಅಪರಾಧಗಳಿಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಯುವತಿಯರು ತಮ್ಮ ವೈಯಕ್ತಿಕ ಫೋಟೋಗಳನ್ನು ಅಪರಿಚಿತ AI ಆ್ಯಪ್‌ಗಳಿಗೆ ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಹೀಗಾಗಿ ಕೇವಲ ವೈರಲ್ ಟ್ರೆಂಡ್‌ಗಾಗಿ ಯಾವುದೇ AI ಆ್ಯಪ್‌ಗೆ ಫೋಟೋ ಅಪ್‌ಲೋಡ್ ಮಾಡುವ ಮುನ್ನ ಆ್ಯಪ್‌ನ ವಿಶ್ವಾಸಾರ್ಹತೆ, ಡೇಟಾ ಬಳಕೆ ಮತ್ತು ಗೌಪ್ಯತಾ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ. ಟ್ರೆಂಡ್‌ಗಿಂತ ನಿಮ್ಮ ಫೋಟೋ ಮತ್ತು ವೈಯಕ್ತಿಕ ಡೇಟಾದ ಸುರಕ್ಷತೆಯೇ ಮುಖ್ಯ ಎಂಬುದು ತಜ್ಞರ ಎಚ್ಚರಿಕೆಯಾಗಿದೆ.




