ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಪಬ್ ಹಾವಳಿಯ ಬಗ್ಗೆ ನ್ಯೂಸ್ 88 ಕರ್ನಾಟಕ ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಪೊಲೀಸ್ ಕಮಿಷನರ್ ಆದೇಶದ ಮೇರೆಗೆ ಡಿಸಿಪಿ ಶೃತಿ ನೇತೃತ್ವದಲ್ಲಿ ಪಬ್ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿಯಲ್ಲಿ ಮಿತಿ ಮೀರುತ್ತಿದ್ದ ಅಕ್ರಮ ಪಬ್ ಹಾವಳಿಯ ವಿರುದ್ಧ ನ್ಯೂಸ್ 88 ಕರ್ನಾಟಕ ನಿರಂತರವಾಗಿ ಧ್ವನಿ ಎತ್ತಿತ್ತು. ಲೇಟ್ ನೈಟ್ ಪಾರ್ಟಿಗಳು, ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕರ ಆತಂಕದ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಪೊಲೀಸ್ ಕಮಿಷನರ್ ಆದೇಶದ ಮೇರೆಗೆ ಡಿಸಿಪಿ ಶೃತಿ ನೇತೃತ್ವದಲ್ಲಿ ಪಬ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಹುಬ್ಬಳ್ಳಿ ನಗರದಲ್ಲಿ ಪಬ್‌ಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪಗಳು ದಿನದಿಂದ ದಿನಕ್ಕೆ ಕೇಳಿಬರುತ್ತಿದ್ದವು…ನಿಗದಿತ ಸಮಯ ಮೀರಿ ಪಾರ್ಟಿಗಳು…ರಾತ್ರಿ ತಡರವರೆಗೂ ಮೋಜು-ಮಸ್ತಿ…ನಿಯಮಗಳ ಉಲ್ಲಂಘನೆಯ ಆರೋಪ…ಇವೆಲ್ಲದರ ಬಗ್ಗೆ ನ್ಯೂಸ್ 88 ಕರ್ನಾಟಕ ನಿರಂತರವಾಗಿ ಧ್ವನಿ ಎತ್ತಿತ್ತು.
ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಕೂಡ ಆಗ್ರಹಿಸುತ್ತಿದ್ದರು.
ಈ ಹಿನ್ನೆಲೆದಲ್ಲಿ ನ್ಯೂಸ್ 88 ಕರ್ನಾಟಕ ಪ್ರಸಾರ ಮಾಡಿದ ವರದಿ ಪೊಲೀಸ್ ಇಲಾಖೆಯ ಗಮನ ಸೆಳೆದಿದೆ.
ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಆದೇಶದ ಮೇರೆಗೆ ಡಿಸಿಪಿ ಶೃತಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹುಬ್ಬಳ್ಳಿಯ ಪಬ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.ಪಬ್‌ನಲ್ಲಿ ನಿಯಮಗಳು ಪಾಲನೆಯಾಗುತ್ತಿವೆಯೇ?
ನಿಗದಿತ ಸಮಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತಿದೆಯೇ?
ಅನುಮತಿ ಇಲ್ಲದ ಯಾವುದೇ ಚಟುವಟಿಕೆಗಳು ನಡೆಯುತ್ತಿವೆಯೇ?
ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಪಬ್‌ನಲ್ಲಿದ್ದ ಕೆಲವರು ದಿಕ್ಕಾಪಾಲಾಗಿ ತೆರಳಿದ ದೃಶ್ಯಗಳು ಕೂಡ ಕಂಡುಬಂದಿವೆ.
ನಗರದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ಈ ಕಾರ್ಯಾಚರಣೆಯ ಮೂಲಕ ರವಾನಿಸಿದೆ ಅಂತಾನೆ ಹೇಳಬಹುದು
ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ…
ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು…
ಎಂಬ ಎಚ್ಚರಿಕೆಯೂ ಇದೀಗ ಹೊರಬಿದ್ದಿದೆ.
ಇನ್ನು ಹುಬ್ಬಳ್ಳಿಯಲ್ಲಿ ಪಬ್ ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ನಿಯಮ ಉಲ್ಲಂಘನೆಗಳ ಮೇಲೆ ಪೊಲೀಸ್ ಇಲಾಖೆ ಮತ್ತಷ್ಟು ನಿಗಾ ವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ
ಒಟ್ಟಿನಲ್ಲಿ…ಹುಬ್ಬಳ್ಳಿಯ ಅಕ್ರಮ ಪಬ್ ಹಾವಳಿ ಕುರಿತು ನ್ಯೂಸ್ 88 ಕರ್ನಾಟಕ ಎತ್ತಿದ ಧ್ವನಿಗೆ ..
ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಕಾರಣವಾಗಿದೆ.ಇನ್ನು ಮುಂದೆ ಅಕ್ರಮ ಚಟುವಟಿಕೆಗಳ ವಿರುದ್ಧ ನಿಮ್ಮ ನ್ಯೂಸ್ 88 ಕರ್ನಾಟಕ ನಿರಂತವಾಗಿ ಕಾರ್ಯಾಚರಣೆ ನಡೆಸಲಿದ್ದು ಅಭಿಯಾನದ ಮೂಲಕ ನಮ್ಮ ಸಂಸ್ಕೃತಿ ಮತ್ತು ಯುವಕರು ಕೆಟ್ಟ ಚಟಕ್ಕೆ ಬಲಿ ಆಗದೆ ನಶಾ ಮುಕ್ತ ಸಮಾಜಕ್ಕೆ ಕಮಿಷನರ್ ಭೂಷಣ್ ಬೋರಸೆ ಅವರ ಜೊತೆ ನ್ಯೂಸ್ 88 ಕರ್ನಾಟಕ ಕೈ ಜೋಡಿಸಲಿದೆ ಅಂತ ಹೇಳಬಹುದು




