ನಗರದಲ್ಲಿ ಆರೋಗ್ಯ ಮತ್ತು ಜಾಗೃತಿಯ ಹೊಸ ಹೆಜ್ಜೆ ಆರಂಭವಾಗಲಿದೆ. ಬ್ಯಾಂಕ್ ಆಫ್ ಇಂಡಿಯಾ ತನ್ನ 121ನೇ ಸಂಸ್ಥಾಪನಾ ದಿನದ ಸಂಭ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಸಂದೇಶ ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅದುವೇ BOI 5K HUBBALLI WALKATHON 2026.
ಯಾವಾಗ, ಎಲ್ಲಿ?
ಸೆಪ್ಟೆಂಬರ್ 6, ಶನಿವಾರ ಬೆಳಿಗ್ಗೆ 6:45ಕ್ಕೆ, ಹುಬ್ಬಳ್ಳಿಯ ತೋಳನಕೆರೆ ಲೇಕ್ ಸರ್ಕಲ್ ನಿಂದ ಈ 5 ಕಿಲೋಮೀಟರ್ ಜಾಗೃತಿ ನಡಿಗೆ ಆರಂಭವಾಗಲಿದೆ. ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ-ಧಾರವಾಡ ವಲಯ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ವಾಕಥಾನ್ ನ ಉದ್ದೇಶ ಏನು?
ಈ ಬಾರಿಯ ವಾಕಥಾನ್ ಗೆ ಎರಡು ಪ್ರಬಲ ಸಂದೇಶಗಳಿವೆ. ಒಂದು “ನಶಾಮುಕ್ತ ಯುವ – ವಿಕಸಿತ ಭಾರತ”. ಇಂದಿನ ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂಬುದು ಇದರ ಆಶಯ. ಎರಡನೆಯ ಸಂದೇಶ “ಸತ್ಯನಿಷ್ಠೆಯಿಂದ ಸಮೃದ್ಧಿ” ಎಂಬ ವಿಜಿಲೆನ್ಸ್ ಜಾಗೃತಿಯ ಕರೆ.
ಬ್ಯಾಂಕ್ ಆಫ್ ಇಂಡಿಯಾ ಪಯಣ:
1906ರ ಸೆಪ್ಟೆಂಬರ್ 7ರಂದು ಮುಂಬೈನಲ್ಲಿ ಕೇವಲ ಒಂದೇ ಕಚೇರಿ ಮತ್ತು 50 ಉದ್ಯೋಗಿಗಳೊಂದಿಗೆ, 10 ವಿವಿಧ ಧರ್ಮದ ಉದ್ಯಮಿಗಳಿಂದ ಆರಂಭವಾದ ಈ ಬ್ಯಾಂಕ್ ಇಂದು ದೇಶದ ಹೆಮ್ಮೆಯಾಗಿದೆ. 1946ರಲ್ಲಿ ಲಂಡನ್ ನಲ್ಲಿ ವಿದೇಶಿ ಶಾಖೆ ತೆರೆದ ಮೊದಲ ರಾಷ್ಟ್ರೀಕೃತ ಬ್ಯಾಂಕ್ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಇಂದು 5,500ಕ್ಕೂ ಹೆಚ್ಚು ಶಾಖೆಗಳು ಮತ್ತು 52,000ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ “Relationship Beyond Banking” ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ.
ರೈತರಿಗೆ 21 ಲಕ್ಷಕ್ಕೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್, 8.4 ಲಕ್ಷ ಜನರಿಗೆ ಪಿಎಂ ಸ್ವನಿಧಿ, 3.5 ಲಕ್ಷ ಮಹಿಳಾ ಉದ್ಯಮಿಗಳಿಗೆ ಬೆಂಬಲ, 46 ಸಾವಿರ ಯುವಕರಿಗೆ RSETI ತರಬೇತಿ ಮತ್ತು 2.85 ಕೋಟಿ ಜನಧನ್ ಖಾತೆಗಳನ್ನು ತೆರೆದಿರುವುದು ಬ್ಯಾಂಕ್ ನ ಸಾಧನೆಯ ಪ್ರತೀಕವಾಗಿದೆ.
ಹುಬ್ಬಳ್ಳಿ ವಲಯದ ಶಕ್ತಿ:
ಉತ್ತರ ಕರ್ನಾಟಕದ 17 ಜಿಲ್ಲೆಗಳಲ್ಲಿ 62 ಶಾಖೆಗಳು, 500ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಸುಮಾರು 9,900 ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಹುಬ್ಬಳ್ಳಿ-ಧಾರವಾಡ ವಲಯ, 130% CD ಅನುಪಾತದೊಂದಿಗೆ ಈ ಭಾಗದಲ್ಲೇ ಅತಿ ಹೆಚ್ಚು ಸಾಲ ವಿತರಣೆ ಮಾಡುತ್ತಿದೆ. ವಲಯ ವ್ಯವಸ್ಥಾಪಕ ತಾರಿಣಿ ಚರಣ ಸಾಹು ಮತ್ತು ಉಪ ವ್ಯವಸ್ಥಾಪಕ ಅಭಿನವ್ ಪಾಂಡೆ ನೇತೃತ್ವದಲ್ಲಿ ಬ್ಯಾಂಕ್ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.
ಹಾಗಾಗಿ, ಈ ವಾಕಥಾನ್ ಕೇವಲ ನಡಿಗೆಯಲ್ಲ, ಆರೋಗ್ಯಕರ ಸಮಾಜ, ನಶಾಮುಕ್ತ ಯುವಪೀಳಿಗೆ ಮತ್ತು ಸತ್ಯನಿಷ್ಠ ಭಾರತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಇಡುವ ಹೆಜ್ಜೆಯಾಗಿದೆ.




