ಹುಬ್ಬಳ್ಳಿ:- ಕಳೆದ ಒಂದು ವಾರದಿಂದ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಗಿ ಯಾರ ಬರತಾರೆ ಅನ್ನೋ ಗೊಂದಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.. ಕಳೆದ ವಾರದ ಹಿಂದೆ ಬೆಳಗಾವಿಯಲ್ಲಿ ಕಮೀಷನರ್ ಆಗಿದ್ದ ಐಪಿಎಸ್ ಭೂಷಣ ಬೋರ್ಷೆ ಹುಬ್ಬಳ್ಳಿ ಕಮೀಷನರ್ ಅಂತಾ ಸರಕಾರ ವರ್ಗಾವಣೆ ಮಾಡಿತ್ತು.
ಒಂದು ವಾರದಿಂದ ಭೂಷಣ ಭೋರ್ಸೆ ಹುಬ್ಬಳ್ಳಿಗೆ ಬರಲ್ಲಾ..ಬೆಳಗಾವಿಯಲ್ಲಿ ಅವರನ್ನ ಬಿಡತಿಲ್ಲಾ…ಅದೂ ಇದೂ ಅಂತಾ ರೂಮರ್ ಎದ್ದಿತ್ತು ಅದೆಲ್ಲಕ್ಕೂ ಈಗ ಉತ್ತರ ಸಿಕ್ಕಿದ್ದು ಹುಬ್ಬಳ್ಳಿ ಕಮೀಷನರ್ ಅಂತಾ ಭೂಷಣ ಬೋರ್ಸೆ ಇಂದೇ ಹುಬ್ಬಳ್ಳಿ ಕಮೀಷನರ್ ಆಗಿ ಅಧಿಕಾರವಹಿಸಲಿದ್ದಾರೆ.




