ಕಾಲೇಜು ವಿದ್ಯಾರ್ಥಿಗಳಿಗಾಗಿ ನೀಡಲಾಗಿರುವ ಬಸ್ ಪಾಸ್ ಇದ್ದರೂ,
“ಈ ಪಾಸ್ ನಡೆಯುವುದಿಲ್ಲ” ಎಂದು ಹೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ-ಧಾರವಾಡ BRTS ‘ಚಿಗರಿ’ ಬಸ್‌ಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ಹಾಗಾದರೆ ವಿದ್ಯಾರ್ಥಿಗಳ ಬಳಿ ಹಣ ಕೇಳುತ್ತಿರುವುದು ಏಕೆ?
ಬಸ್ ಪಾಸ್ ಇದ್ದರೂ ಹೆಚ್ಚುವರಿ ಹಣ ವಸೂಲಿ ಮಾಡಲು ಸಿಬ್ಬಂದಿಗೆ ಅಧಿಕಾರ ಇದೆಯೇ?
ಈ ಆರೋಪದ ಬಗ್ಗೆ BRTS ಅಧಿಕಾರಿಗಳು ಏನು ಹೇಳುತ್ತಾರೆ?
ಕಾಲೇಜಿಗೆ ತೆರಳಲು ಪ್ರತಿನಿತ್ಯ ಬಸ್‌ನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು ಕೈಯಲ್ಲಿ ಬಸ್ ಪಾಸ್ ಇದ್ದರೂ,
“ಈ ಪಾಸ್ ಇಲ್ಲಿ ನಡೆಯುವುದಿಲ್ಲ… ಹಣ ಕೊಡಿ” ಎಂದು ಹೇಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ
ಹಣ ಇಲ್ಲ ಎಂದು ವಿದ್ಯಾರ್ಥಿಗಳು ಹೇಳಿದರೂ,
ಪಾಸ್ ಸ್ವೀಕರಿಸುವುದಿಲ್ಲ ಎಂದು ಹೆದರಿಸಿ ಹಣ ಪಡೆಯಲಾಗುತ್ತಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳಿಂದ ನಿಯಮಬಾಹಿರವಾಗಿ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ
ವಿದ್ಯಾರ್ಥಿಗಳು ಹೇಳುತ್ತಿರುವ ಪ್ರಕಾರ “ನಮ್ಮ ಬಳಿ ಬಸ್ ಪಾಸ್ ಇತ್ತು. ಆದರೆ ಪಾಸ್ ನಡೆಯುವುದಿಲ್ಲ ಎಂದು ಹೇಳಿ ಹಣ ಕೇಳಿದರು. ಹಣ ಇಲ್ಲ ಎಂದರೂ ಬಿಡಲಿಲ್ಲ” ನಮ್ಮ ಬಳಿ ನೂರು ಇನ್ನೂರು ರೂಪಾಯಿ ಅಧಿಕೃತ ದಾಖಲಾತಿ ಇಲ್ಲದೆ ಕಿತ್ತುಕೊಂಡಿದ್ದಾರೆ ಎಂದು ಆರೋಪವನ್ನು ಕೆಲವು ವಿದ್ಯಾರ್ಥಿಗಳು ಮಾಡಿದ್ದಾರೆ.
ಬಸ್ ಪಾಸ್‌ಗೆ ಸಂಬಂಧಿಸಿದ ನಿಯಮಗಳು ಏನೇ ಇರಲಿ,ಅದನ್ನು ಸ್ಪಷ್ಟವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಜವಾಬ್ದಾರಿ ಸಾರಿಗೆ ಸಂಸ್ಥೆಯದ್ದು.ಪಾಸ್ ಮಾನ್ಯವಲ್ಲದಿದ್ದರೆ,
ಅದಕ್ಕೆ ಕಾರಣವೇನು?ಯಾವ ನಿಯಮದಡಿ ಪಾಸ್ ತಿರಸ್ಕರಿಸಲಾಗಿದೆ?
ವಿದ್ಯಾರ್ಥಿಯಿಂದ ಪಡೆಯಲಾಗುತ್ತಿರುವ ಹಣಕ್ಕೆ ಅಧಿಕೃತ ರಸೀದಿ ನೀಡಲಾಗುತ್ತಿದೆಯೇ?
ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನಿರ್ದೇಶಕರು ನೀಡಬೇಕಿದೆ
ಸಾರಿಗೆ ಸಂಸ್ಥೆಯ ಅಧಿಕೃತ ನಿಯಮಗಳ ಪ್ರಕಾರ ಪಾಸ್ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.
ಪಾಸ್ ಮಾನ್ಯವಾಗಿದ್ದರೆ,
ವಿದ್ಯಾರ್ಥಿಯಿಂದ ಹೆಚ್ಚುವರಿ ಹಣ ಕೇಳಲು ಸಿಬ್ಬಂದಿಗೆ ಅಧಿಕಾರ ಇದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು.
ಪಾಸ್ ಅಮಾನ್ಯವಾಗಿದ್ದರೆ,
ಅದಕ್ಕೆ ಸಂಬಂಧಿಸಿದ ನಿಯಮ, ಕಾರಣ ಮತ್ತು ಪರ್ಯಾಯ ವ್ಯವಸ್ಥೆಯನ್ನು ವಿದ್ಯಾರ್ಥಿಗೆ ತಿಳಿಸಬೇಕಾಗುತ್ತದೆ.
ಆದರೆ ಯಾವುದೇ ಸಂದರ್ಭದಲ್ಲಿ ಬೆದರಿಕೆ, ಒತ್ತಡ ಅಥವಾ ರಸೀದಿ ಇಲ್ಲದೆ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪ ಸತ್ಯವಾಗಿದ್ದರೆ,
ಅದರ ಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸುವುದು ಅಗತ್ಯವಾಗಿದೆ
ಒಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದೆ.ವಿದ್ಯಾರ್ಥಿಗಳಿಂದ ನಿಯಮಬಾಹಿರವಾಗಿ ಹಣ ವಸೂಲಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೋ ಇಲ್ಲೋ ಎಂಬುದನ್ನ ಕಾದು ನೋಡಬೇಕಿದೆ




