spot_img
Saturday, March 21, 2026
33.1 C
Hubballi

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ

ರಾಜ್ಯದಲ್ಲಿ 15 ವರ್ಷ ಮೀರಿದ ಹಳೆಯ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಧಾನ ಪರಿಷತ್​​ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಆಯಸ್ಸು‌ ಮೀರಿದ 1.38 ಕೋಟಿ‌ ವಾಹನಗಳನ್ನ ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು ಎಂದಿದ್ದಾರೆ.

ಬೆಂಗಳೂರು, ಡಿಸೆಂಬರ್​​ 17: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್​​ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್​​ನಲ್ಲಿ ತಿಳಿಸಿದ್ದಾರೆ..

ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು. ಕೇಂದ್ರ ಸರ್ಕಾರದ ನೀತಿಯ ಪ್ರಕಾರ ಕಮರ್ಷಿಯಲ್​​ ವಾಹನಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. ಆಯಸ್ಸು‌ ಮೀರಿದ 1.38 ಕೋಟಿ‌ ವಾಹನಗಳನ್ನ ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ತಮಿಳುನಾಡಿನಲ್ಲಿ‌ ಕೆಲವೊಂದು ವಾಹನಗಳಿಗೆ‌ ವಿನಾಯ್ತಿ‌ಕೇಳಿದ್ದಾರೆ. ಅದೇ‌ ರೀತಿ ಅಗ್ನಿಶಾಮಕ ಇಲಾಖೆಯಲ್ಲಿ‌ ಕಡಿಮೆ ಬಳಕೆಯಾದ ವಾಹನಗಳಿವೆ. ಅಂತಹ ವಾಹನಗಳಿಗೆ‌ ವಿನಾಯಿತಿ‌ ಕೋರಿ ನಾವು ಕೂಡ‌ ಪತ್ರ ಬರೆದಿದ್ದೇವೆ. 15 ವರ್ಷ ಮೀರಿದ ಬಸ್ ಗಳು ನಿಗಮದಲ್ಲಿ‌ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಏನು?

ಹಳೆಯ, ಹೆಚ್ಚು ಮಾಲಿನ್ಯ ಮಾಡುವ ವಾಹನಗಳನ್ನು ಹಂತ ಹಂತವಾಗಿ ತೆಗೆದುಹಾಕಲು, ಪರಿಸರವನ್ನು ಸುಧಾರಿಸಲು ಮತ್ತು ವಾಹನ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಜಾರಿಗೆ ಬಂದಿದೆ. 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕೋದು ಕಡ್ಡಾಯವಾಗಿದೆ. ಆದರೆ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್ ಕಡ್ಡಾಯವಾಗಿದ್ದು, ಇದರಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಗುಜರಿ ಹಾಕಿದವರಿಗೆ ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹ ಧನ ಕೂಡ ಸಿಗಲಿದೆ.

ಇನ್ನು ಮಾಹಿತಿಯ ಪ್ರಕಾರ ಕರ್ನಾಟಕದ ಬೆಂಗಳೂರೊಂದರಲ್ಲೇ 15 ವರ್ಷ ಮೀರಿದ 37,45,339 ವಾಹನಗಳು ಇವೆ. ಆ ಪೈಕಿ ಬೈಕ್​​ಗಳ ಸಂಖ್ಯೆ 24,46,372 ಇದ್ದರೆ, ಕಾರುಗಳ ಸಂಖ್ಯೆ 7,059,39, ಲಾರಿ, ಬಸ್​ ಸೇರಿದಂತೆ ಇತರೆ ವಾಹನಗಳ ಸಂಖ್ಯೆ 5,93,028ರಷ್ಟಿವೆ ಎನ್ನಲಾಗಿದೆ.

Hot this week

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...

ವಿನೋದ್ ಅಸೂಟಿ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ

ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ...

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ...

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡಿತಿರೋದು ಖುಷಿಯಿದೆ; ಪಡಿಕ್ಕಲ್

ನಾಳೆಯಿಂದ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​ ಪಂದ್ಯ ಪ್ರಾರಂಭಗೊಳ್ಳಲಿದ್ದು ಈ ಕುರಿತು ಕರ್ನಾಟಕ...

Topics

ಹುಬ್ಬಳ್ಳಿಯ ಸಂತೋಷ ಆರ್ ಶೆಟ್ಟಿಗೆ ‘ಶ್ರೀ ಮಂತ್ರಾಲಯ ಪರಿಮಳ’ ಪ್ರತಿಷ್ಠಿತ ಪ್ರಶಸ್ತಿ..!

ಹುಬ್ಬಳ್ಳಿ: ಸಮಾಜ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹುಬ್ಬಳ್ಳಿ ನಿವಾಸಿ ಸಂತೋಷ...

ಬೆಳಗಾವಿ | ಅಕ್ರಮ ಗಣಿಗಾರಿಕೆ: ಕಲ್ಲೆಸೆದು ತಡೆದ ಮಹಿಳಾ ಅಧಿಕಾರಿ

ತಾಲ್ಲೂಕಿನ ಇನಾಂ ಬಡಸ್ ಗ್ರಾಮದ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಕಾರ್ಯಚರಣೆ...

ರಾಜ್ಯದ ಮರಳು ಸಂಪತ್ತು “Illegal sand mining” ದಂಧೆಕೋರರ ಪಾಲು, ಸರಕಾರದ ಮೌನ ನಡೆ,ಬೊಕ್ಕಸನಷ್ಟಕ್ಕೆ ಹೊಣೆ ಯಾರು?

ಹಾವೇರಿ :ರಾಜ್ಯದಲ್ಲಿ ಮರಳು ಗಣಿಗಾರಿಕೆ ಕಳೆದ 15 ವರ್ಷಗಳಿಂದ ನದಿ ಮತ್ತು...
spot_img

Related Articles

Popular Categories

spot_img
error: Content is protected !!