ರಾಜ್ಯದಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆದ್ರೆ, ಇಲ್ಲಿ ಮಾತ್ರ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಇಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಮರಳು ಲಾರಿಗಳು ರಾಜಾರೋಷವಾಗಿ ಓಡಾಡ್ತಿವೆ… ಇತ್ತ ಲಾರಿಗಳನ್ನು ತಡೆಯಬೇಕಾದ ಪೊಲೀಸರ ಮೇಲೆಯೇ ಗಂಭೀರ ಆರೋಪ ಕೇಳಿ ಬಂದಿದೆ.
ರಸ್ತೆಯಲ್ಲಿ ಸಾಲು ಸಾಲಾಗಿ ಓಡಾಡುತ್ತಿರುವ ಮರಳು ಲಾರಿಗಳು… ನಿಯಮ ಉಲ್ಲಂಘನೆಯಾಗ್ತಿದೆಯಾ? ಅನುಮತಿ ಇಲ್ಲದೇ ಮರಳು ಸಾಗಿಸಲಾಗ್ತಿದೆಯಾ? ಅನ್ನೋ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.
ಇದರ ಮಧ್ಯೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.ಮರಳು ಲಾರಿಗಳಿಗೆ ಮಾಮೂಲಿ ಕೂಡ ನೀಡಬೇಕು… ಅದಕ್ಕೂ ಹೊರತಾಗಿ ಹೈವೇಯಲ್ಲಿ ಪಾಸ್ ಆಗಲು ಪ್ರತಿ ಲಾರಿಗೆ ನೂರು ರೂಪಾಯಿ ಕೊಡಬೇಕು ಅನ್ನೋ ಆರೋಪ ಕೂಡ ಕೇಳಿ ಬಂದಿದೆ.
ಒಂದೆಡೆ ಅಕ್ರಮ ಮರಳು ಸಾಗಾಟದಿಂದ ಸರ್ಕಾರಕ್ಕೆ ರಾಜಸ್ವ ನಷ್ಟವಾಗ್ತಿದೆ ಅನ್ನೋ ಆರೋಪ. ಮತ್ತೊಂದೆಡೆ, ರಸ್ತೆ ಸುರಕ್ಷತೆಗೂ ಇದು ದೊಡ್ಡ ಸವಾಲಾಗಿದೆ. ಮರಳು ಲಾರಿಗಳು ನಿಯಮ ಮೀರಿ ಸಂಚರಿಸುತ್ತಿದ್ದರೆ, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಯಾರದ್ದು?
ಪೊಲೀಸರು ವಾಹನಗಳನ್ನು ತಪಾಸಣೆ ಮಾಡ್ತಾರಾ? ದಾಖಲೆಗಳನ್ನು ಪರಿಶೀಲಿಸ್ತಾರಾ? ಅಕ್ರಮ ಮರಳು ಸಾಗಾಟ ಕಂಡುಬಂದರೆ ಪ್ರಕರಣ ದಾಖಲಿಸ್ತಾರಾ?ಅಥವಾ ಹಣ ಕೊಟ್ಟರೆ ಎಲ್ಲವೂ ಸರಿ ಅನ್ನೋ ವ್ಯವಸ್ಥೆ ನಡೆಯುತ್ತಿದೆಯಾ? ಎಂಬುದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿಯೇ ಉಳದಿದೆ..
ಈ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕಿದೆ.ಮರಳು ಲಾರಿಗಳಿಂದ ಯಾವುದೇ ರೀತಿಯ ಅನಧಿಕೃತ ಹಣ ವಸೂಲಿ ನಡೆಯುತ್ತಿದೆಯಾ? ನಡೆಯುತ್ತಿದ್ದರೆ ಯಾರ ಸೂಚನೆಯ ಮೇರೆಗೆ?
ಪ್ರತಿ ಲಾರಿಗೆ ಎಷ್ಟೆಷ್ಟು ರೂಪಾಯಿ ಮಾಮೂಲಿ ಪಡೆಯಲಾಗುತ್ತಿದೆ ಅನ್ನೋ ಆರೋಪಕ್ಕೆ ಆಧಾರವೇನು? ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕಾಗಿದೆ.
ಒಟ್ಟಿನಲ್ಲಿ ಕೊಪ್ಪಳ, ಗದಗ, ನರಗುಂದ ನವಲಗುಂದ ಹುಬ್ಬಳ್ಳಿ ಸಿಟಿ ಹುಬ್ಬಳ್ಳಿ ಗ್ರಾಮೀಣ ಭಾಗದ ಪೊಲೀಸ್ ಠಾಣೆ ದಾಟಿ ಅವಳಿ ನಗರದ ಜನರಿಗೆ ತಲುಪುತ್ತಿದೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾದ ವ್ಯವಸ್ಥೆಯಲ್ಲೇ ಅಕ್ರಮ ವಸೂಲಿ ನಡೆಯುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ ಪ್ರತಿ ಠಾಣೆಗೂ ಒಂದು ಲಾರಿಯಿಂದ ಎಷ್ಟು ಮಾಮೂಲಿ ಪೋಲೀಸರ ಕೈ ಸೇರ್ತಾ ಇದೆ ಇದು ಅತ್ಯಂತ ಗಂಭೀರ ವಿಚಾರ. ಹೀಗಾಗಿ ಪೊಲೀಸ್ ಇಲಾಖೆ ಕೂಡಲೇ ತನಿಖೆ ನಡೆಸಿ ಸತ್ಯ ಏನು ಅನ್ನೋದನ್ನ ಜನರ ಮುಂದೆ ಸ್ಪಷ್ಟಪಡಿಸಬೇಕಿದೆ…




