ಮೆರವಣಿಗೆ ಮಾಡೋದು ಸಂಪ್ರದಾಯ ಇರಬಹುದು… ಆದರೆ ಅದೇ ಮೆರವಣಿಗೆಯಿಂದ ಸಾರ್ವಜನಿಕರಿಗೆ ಗಂಟೆಗಟ್ಟಲೆ ತೊಂದರೆಯಾದ್ರೆ ಹೊಣೆ ಯಾರು ಎಂಬುದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಟ್ರಾಫಿಕ್ ನಿಯಮಗಳನ್ನೇ ಗಾಳಿಗೆ ತೂರಿ ಎತ್ತುಗಳ ಮೆರವಣಿಗೆ ನಡೆಸಿದ ಆರೋಪ ಕೇಳಿಬಂದಿದೆ. ವಾಹನ ಸವಾರರು ಪರದಾಡಿದರೆ, ಮೆರವಣಿಗೆಯಲ್ಲಿದ್ದ ಎತ್ತುಗಳಿಗೂ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.ಇದು ಸಂಭ್ರಮದ ಮೆರವಣಿಗೆಯೋ… ಅಥವಾ ಸಾರ್ವಜನಿಕರಿಗೆ ಸಂಕಷ್ಟ ತಂದ ಮೆರವಣಿಗೆಯೋ? ಎಂಬ ಮಾತುಗಳು ಕೇಳಿ ಬರುತ್ತಿವೆ
ರಸ್ತೆ ಮಧ್ಯೆ ಎತ್ತುಗಳ ಮೆರವಣಿಗೆ ಸಾಗಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಒಂದು ಕಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್… ಮತ್ತೊಂದು ಕಡೆ ವಾಹನ ಸವಾರರ ಪರದಾಟ.
ಇದರ ನಡುವೆ ಮೆರವಣಿಗೆಯಲ್ಲಿ ಪ್ರಾಣಿಗಳಿಗೆ ಸೂಕ್ತ ಕಾಳಜಿ ವಹಿಸಲಾಗಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಎತ್ತುಗಳಿಗೆ ಒತ್ತಡ, ಹೊಡೆತ ಅಥವಾ ಕಿರುಕುಳ ನೀಡಿದ್ದರೆ ಅದು ಪ್ರಾಣಿ ಹಿಂಸೆ ವ್ಯಾಪ್ತಿಗೆ ಬರಬಹುದೇ ಎಂಬ ಚರ್ಚೆಯೂ ಶುರುವಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಮೆರವಣಿಗೆ ನಡೆಸಲು ನಿಯಮಗಳಿವೆ. ಹಾಗಾದ್ರೆ ಈ ಮೆರವಣಿಗೆಗೆ ಅಗತ್ಯ ಅನುಮತಿ ಇತ್ತಾ? ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರಾ?ಸಂಪ್ರದಾಯದ ಹೆಸರಿನಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಅವಕಾಶವಿದೆಯೇ.?
ಪ್ರಾಣಿಗಳಿಗೂ ತೊಂದರೆ… ಸಾರ್ವಜನಿಕರಿಗೂ ಪರದಾಟ… ಇದಕ್ಕೆ ಹೊಣೆ ಯಾರು? ಎಲ್ಲದಕ್ಕೂ ಪೊಲೀಸ್ ಇಲಾಖೆ ಯಾವ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಲ್ಲುತ್ತೆ ಎಂಬುದನ್ನ ಕಾದು ನೋಡಬೇಕಿದೆ




