spot_img
Thursday, September 17, 2026
24.1 C
Hubballi

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡಿತಿರೋದು ಖುಷಿಯಿದೆ; ಪಡಿಕ್ಕಲ್

ನಾಳೆಯಿಂದ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​ ಪಂದ್ಯ ಪ್ರಾರಂಭಗೊಳ್ಳಲಿದ್ದು ಈ ಕುರಿತು ಕರ್ನಾಟಕ ತಂಡದ ನಾಯಕ ದೇವದತ್ತ್​ ಪಡಿಕ್ಕಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿ: ರಣಜಿ ಟ್ರೋಫಿ 2025-26ನೇ ಆವೃತ್ತಿ ಅಂತಿಮ ಘಟಕ್ಕೆ ತಲುಪಿದ್ದು ನಾಳೆ ನಡೆಯಲಿರುವ ಫೈನಲ್​ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿ ಆಗುತ್ತಿವೆ. ಕರ್ನಾಟಕ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡವನ್ನು ಸೋಲಿಸಿ 2014-15ರ ನಂತರ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡರೇ, ಜಮ್ಮು ಮತ್ತು ಕಾಶ್ಮೀರ ತಂಡವು ಬಂಗಾಳವನ್ನು ಸೋಲಿಸಿ ಚೊಚ್ಚಲ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪಂದ್ಯವೂ ಫೆಬ್ರವರಿ 24 ರಿಂದ 28 ರವರೆಗೆ ಹುಬ್ಬಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಲ್ಲಿಯ ಪಿಚ್​ ಬಗ್ಗೆ ಕರ್ನಾಟಕ ತಂಡದ ನಾಯಕ ದೇವದತ್ತ್​ ಪಡಿಕ್ಕಲ್​ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿನ ಪಿಚ್ ಬ್ಯಾಟಿಂಗ್​ ಸ್ನೇಹಿಯಂತೆ ಕಾಣುತ್ತಿದೆ. ಕಳೆದ ಎರಡು ಬಾರಿ ಈ ಮೈದಾನದಲ್ಲಿ ಪಂದ್ಯ ಆಡಿದಾಗ ಉತ್ತಮ ಸಪೋರ್ಟ್ ಸಿಕ್ಕಿದೆ. ಕರ್ನಾಟಕದಲ್ಲಿ ತುಂಬಾ ಪ್ರತಿಭಾವಂತ ಆಟಗಾರರು ಇದ್ದಾರೆ. ಹುಬ್ಬಳ್ಳಿಯಲ್ಲಿ ಫೈನಲ್ ಪಂದ್ಯ ನಡಿತಿರೋದು ಖುಷಿ ತಂದಿದೆ ಎಂದು ಪಡಿಕ್ಕಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಫೈನಲ್ ಒತ್ತಡ ಇರುತ್ತದೆ: ಸೆಮಿಫೈನಲ್​ನಲ್ಲಿ ಸಾವಿರ ರನ್ ಗಳಿಸಿದ್ದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸದೆ.
ತವರಿನಲ್ಲಿ ರಣಜಿ ಪೈನಲ್ ಆಡ್ತೀರೋದು ಖುಷಿಯಿದೆ. ನಾವೆಲ್ಲಾ ಫೈನಲ್ ಆಟವಾಡಲು ಸಜ್ಜಾಗಿದ್ದೇವೆ ಕೆ ಎಲ್ ರಾಹುಲ್, ಮಯಾಂಕ್, ಕರುಣ್, ಪ್ರಸಿದ್ಧ್​ ಕೃಷ್ಣ ತಂಡದಲ್ಲಿದ್ದಾರೆ. ಭಾರತದ ಪರ ಆಡಿದ ಐವರು ಆಟಗಾರರು ತಂಡದಲ್ಲಿರುವುದು ತಂಡಕ್ಕೆ ಒಳ್ಳೆಯದಾಗಿದೆ ಎಂದು ತಿಳಿಸಿದರು. ಕಳೆದ ಪಂದ್ಯದಲ್ಲಿ ನನಗೆ ಸ್ವಲ್ಪ ಕೈಗೆ ಗಾಯವಾಗಿತ್ತು. ಆದರೆ ಅಗತ್ಯ ಚಿಕಿತ್ಸೆ ಹಾಗೂ ತರಬೇತಿಯನ್ನು ಪೂರ್ಣಗೊಳಿಸಿದ್ದೇನೆ. ಇದೀಗ ಪಂದ್ಯಕ್ಕೆ ಸಂಪೂರ್ಣ ಫಿಟ್​ ಆಗಿದ್ದೇನೆ ಎಂದು ಹೇಳಿದರು.

ನಂತರ ನಾಯಕತ್ವದ ಬಗ್ಗೆ ಮಾತನಾಡಿದ ಅವರಿ, ಸೀಸನ್‌ ಅರ್ಧದಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ತಂಡದಲ್ಲಿದ್ದ ಹಿರಿಯ ಆಟಗಾರರ ಅನುಭವ ನನಗೆ ದೊಡ್ಡ ಬೆಂಬಲವಾಯಿತು. ಇದರಿಂದಾಗಿ ನಾಯಕತ್ವದ ಒತ್ತಡ ಕಾಣಿಸಲಿಲ್ಲ. ಹಿರಿಯರು ಸಹ ಅತ್ಯುತ್ತಮ ಸಹಕಾರ ನೀಡಿದರು ಇದರಿಂದಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಲು ಸಾಧ್ಯವಾಯ್ತು ಮುಂದೆಯೂ ಇದೇ ರೀತಿಯಲ್ಲಿ ತಂಡ ಮುಂದುವರೆಯಲು ನಾನು ಆಶಿಸುತ್ತೇನೆ ಎಂದು ತಿಳಿಸಿದರು.

ಪಿಚ್​ ಬಗ್ಗೆ ಪ್ರತಿಕ್ರಿಯಿಸಿ, ಪಂದ್ಯ ಆರಂಭಕ್ಕೂ ಮುನ್ನ ಈ ಮೈದಾನದಲ್ಲಿ ಸ್ಕೋರ್ ಬಗ್ಗೆ ಊಹಿಸುವುದು ಕಷ್ಟ. ಆದರೆ ಪಿಚ್​ ಗಮನಿಸಿದರೇ ಉತ್ತಮ ಸ್ಕೋರ್​ ನಿರೀಕ್ಷೆಯಿದೆ. ನಾವು ಇಲ್ಲಿ ಕಳೆದ ಎರಡು ಬಾರಿ ಆಡಿದಾಗಲೂ ಉತ್ತಮ ವಿಕೆಟ್ ಸಿಕ್ಕಿವೆ. ಸಾಮಾನ್ಯವಾಗಿ ಇಲ್ಲಿ ಹೆಚ್ಚಿನ ಸ್ಕೋರ್‌ಗಳ ಪಂದ್ಯಗಳು ನಡೆದಿವೆ. ಫೈನಲ್​ ಪಂದ್ಯವೂ ರೋಚಕದಿಂದ ಇರಲಿದ್ದು ಮತ್ತೊಮ್ಮೆ ಹೈಸ್ಕೋರಿಂಗ್ ಪಂದ್ಯ ನೋಡುವ ನಿರೀಕ್ಷೆ ವ್ಯಕ್ತಪಡಿಸಿದರು. ನಾವು ಶೇ.100 ಶ್ರಮ ಪಟ್ಟು ಪಂದ್ಯ ಗೆಲ್ಲುವ ವಿಶ್ವಾಸವಿದೆ ಎಂದರು.

ಮುಂದುವರೆದು ಮಾತನಾಡುತ್ತ, ಕರ್ನಾಟಕ ರಾಜ್ಯದಲ್ಲಿ ಅಪಾರ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಆ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಹುಬ್ಬಳ್ಳಿಂತಹ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ಅತ್ಯಂತ ಅಗತ್ಯ. ಈ ಭಾಗದಿಂದ ಅನೇಕ ಪ್ರತಿಭಾವಂತ ಕ್ರಿಕೆಟರ್‌ಗಳು ಹೊರಬಂದಿದ್ದಾರೆ. ಆಟವನ್ನು ಉತ್ತೇಜಿಸಲು ಇಂತಹ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸುವುದ ಅತ್ಯವಶಕ ಎಂದರು.

ನಂತರ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಮಾತನಾಡಿ, ಅಂತಿಮ ಪಂದ್ಯವನ್ನು ಎಲ್ಲರು ಆನಂದಿಸುತ್ತೇವೆ. ನಮ್ಮ ಕ್ರಿಕೆಟ್​ ಅನ್ನು ನಾವು ಆಡುತ್ತೇವೆ. ನಮ್ಮ ಆಟಗಾರರು ತುಂಬಾ ಕಾನ್ಪಿಡೆಂಟ್ ಆಗಿದ್ದಾರೆ. ಮುಂಬೈ ವಿರುದ್ಧ ಕೂಡ ಆಟವಾಡಿ ಗೆದ್ದಿದ್ದೇವೆ. ಇಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದೇವೆ ಎಂದರು.

ಮುಖಾಮುಖಿ ದಾಖಲೆ: ರಣಜಿಯಲ್ಲಿ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿ ಆಗುತ್ತಿವೆ. ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಗೆಲುವು ಸಾಧಿಸಿತ್ತು. ಈ ಹಿನ್ನೆಲೆ ಫೈನಲ್​ ಪಂದ್ಯದಲ್ಲೂ ಫೆವರೀಟ್​ ತಂಡವಾಗಿ ಕಣಕ್ಕಿಳಿಯಲಿದೆ.

ತಂಡಗಳುಕರ್ನಾಟಕ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶ್ಯಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

ಜಮ್ಮು ಮತ್ತು ಕಾಶ್ಮೀರ: ಶುಭಂ ಖಜುರಿಯಾ, ಯವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಕಿಬ್ ನಬಿ ದಾರ್, ವಂಶಪಾಂಶ್ ಶರ್ಮಾ, ಯುದ್ವೀರ್ ಸಿಂಗ್ ಚರಕ್, ಸುನೀಲ್ ಕುಮಾರ್.

Hot this week

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

Topics

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...

200 ವರ್ಷಗಳ ಇತಿಹಾಸವಿರುವ ಬೇಡಿದ್ದೆಲ್ಲ ಕೊಡುವ ಸಿಂಧೂರ ಗಣಪ..

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಚಬ್ಬಿ ಗ್ರಾಮದಲ್ಲಿರುವ ಚಬ್ಬಿ ಕಣಪ್ಪ ಅಥವಾ ಸಿಂಧೂರ...

ಬೆಳಗಾವಿಯಲ್ಲಿ ಬೆಚ್ಚಿಬೀಳಿಸಿದ ಡಬಲ್ ಮ*ರ್ಡರ್: ಮಾಜಿ ಯೋಧ, ಪುತ್ರಿ ಬರ್ಬರ ಹ*ತ್ಯೆ

ಬೆಳಗಾವಿ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಆವರಣದಲ್ಲೇ ಮಾಜಿ...
spot_img

Related Articles

Popular Categories

spot_img
error: Content is protected !!