spot_img
Thursday, September 17, 2026
24.1 C
Hubballi

ರಾಜ್ಯದ ಮರಳು ಸಂಪತ್ತು “Illegal sand mining” ದಂಧೆಕೋರರ ಪಾಲು, ಸರಕಾರದ ಮೌನ ನಡೆ,ಬೊಕ್ಕಸನಷ್ಟಕ್ಕೆ ಹೊಣೆ ಯಾರು?

ಹಾವೇರಿ :ರಾಜ್ಯದಲ್ಲಿ ಮರಳು ಗಣಿಗಾರಿಕೆ ಕಳೆದ 15 ವರ್ಷಗಳಿಂದ ನದಿ ಮತ್ತು ಹಳ್ಳಕೊಳ್ಳದ ಪಾತ್ರದಲ್ಲಿ ಸರ್ಕಾರದ ಅನುಮತಿ ಇಲ್ಲದೆ ನಡೆಯುತ್ತಿದ್ದು ಅದು ಇತ್ತೀಚಿಗೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ, ಇದಕ್ಕೆ ಸರ್ಕಾರದ ಮೌನ ವಹಿಸಿರುವುದು ಯಾವ ಕಾರಣಕ್ಕೆ ಅನ್ನೋದು ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಕರ್ನಾಟಕದಲ್ಲಿ 2020ರ ಹೊಸ ಮರಳು ನೀತಿಅಡಿ ಗ್ರಾಪಂ ವ್ಯಾಪ್ತಿಯಲ್ಲಿ ಟನ್‌ಗೆ ₹300 ದರದಲ್ಲಿ ಮರಳು ಲಭ್ಯವಿರಬೇಕು ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಆದರೆ ಕಂದಾಯ ಇಲಾಖೆ ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ ವಹಿಸಿರುವುದು ಅಕ್ರಮಕ್ಕೆ ಕಾರಣವಾಗಿದೆ.

ಸಾರ್ವಜನಿಕರು ಮನೆ ಕಟ್ಟಲಿಕ್ಕೆ ಅವಶ್ಯಕವಾಗಿ ಬೇಕಾಗಿರುವುದು ಮರಳು ಇದನ್ನು ಸರ್ಕಾರದ ವತಿಯಿಂದ ಪೂರೈಸಿದರೆ ಅಕ್ರಮ ಮರಳುಗಾರಿಕೆ ತಡೆಗಟ್ಟಬಹುದು ಆದರೆ ಇದರಲ್ಲಿ ಸರ್ಕಾರದ ನಿರ್ಲಕ್ಷ್ಯವೂ ಕಾರಣವಾಗಿದೆ,ಸರ್ಕಾರದ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿಗದಿತ ದರದಲ್ಲಿ ಪ್ಯಾಕೆಟ್ ಮೂಲಕ ಪೂರೈಸಿದರೆ ಸರ್ಕಾರಿ ಆದಾಯವು ಬರುತ್ತದೆ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಬಹುದು ಅಂತಾರೆ ತಜ್ಞರು.

ಅತಿಯಾದ ಗಣಿಗಾರಿಕೆಯಿಂದ ನದಿ ದಡಗಳ ಸವೆತ, ಪರಿಸರ ಹಾನಿ ಮತ್ತು ಸೇತುವೆಗಳ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ.

ಮರಳು ಗಣಿಗಾರಿಕೆಯ ಮೂಲಗಳು: ಹೆಚ್ಚಾಗಿ ನದಿ ತಳಗಳು, ಒಣ ನದಿ ಪಾತ್ರಗಳು, ಮತ್ತು ಕರಾವಳಿ ಪ್ರದೇಶಗಳಿಂದ ಮರಳು ತೆಗೆಯಲಾಗುತ್ತದೆ.

ಕರ್ನಾಟಕದ ಮರಳು ನೀತಿ (2020): ಗ್ರಾಮ ಪಂಚಾಯಿತಿಗಳ ಮೂಲಕ ಮರಳು ವಿಲೇವಾರಿ ಮಾಡಲು ಆದೇಶವಾಗಿರೋದು ಕೇವಲ ಆದೇಶವಾಗಿಯೇ ಉಳಿದಿದೆ ಆದರೆ ಜಾರಿಗೆ ಬಂದಿಲ್ಲ. ಇದರಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ಕಾಮಗಾರಿಗಳಿಗೆ ಕಡಿಮೆ ದರದಲ್ಲಿ ಮರಳು ದೊರೆಯುವಂತೆ ನೋಡಿಕೊಳ್ಳವುದಾಗಿದೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ: ಅಕ್ರಮವಾಗಿ ನಡೆಯುವ ಮರಳು ಸಾಗಣೆ ನದಿ ಪರಿಸರ ವ್ಯವಸ್ಥೆ ಮತ್ತು ಸೇತುವೆಗಳಿಗೆ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ.

ಪರಿಸರ ಪ್ರಭಾವ: ನದಿ ಪಾತ್ರದ ಗಣಿಗಾರಿಕೆಯು ನೀರಿನ ಲವಣಾಂಶ ಹೆಚ್ಚಳ, ಸಸ್ಯವರ್ಗದ ನಾಶ, ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಬಹುದು.

ನಿಯಂತ್ರಣ ಕ್ರಮಗಳು: ಯಾಂತ್ರಿಕೃತ ದೋಣಿಗಳು (ಡ್ರೆಡ್ಜಿಂಗ್) ಮತ್ತು ಪೊಕ್ಲೇನ್ ಬಳಕೆಯನ್ನು ನಿಯಂತ್ರಿಸಲಾಗಿದೆ, ಮತ್ತು ಗಣಿಗಾರಿಕೆ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಗಣಿ ಮತ್ತು ಉಪ ವಿಜ್ಞಾನ ಇಲಾಖೆ &ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ, ಕಂದಾಯ ಇಲಾಖೆ,ಪೊಲೀಸ್ ಇಲಾಖೆ , ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಟಾರ್ಸ್ ಫೋರ್ಸ್ ಮೂಲಕ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿವೆ.

ಅಕ್ರಮ ಮರಳು ಕಣಿಗಾರಿಕೆ ಪರಿಣಾಮಗಳು:
ನದಿ ಪಾತ್ರದ ಆಳ ಹೆಚ್ಚಾಗುವುದು.ಭೂಗತ ಜಲಮಟ್ಟ ಕುಸಿತ.ಜಲಚರಗಳಿಗೆ ಅಪಾಯ.ಸೇತುವೆಗಳು ಮತ್ತು ಹೆದ್ದಾರಿಗಳಿಗೆ ಹಾನಿ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಜಿಲ್ಲಾಡಳಿತಗಳು ಮರಳು ಗಣಿಗಾರಿಕೆಗೆ ನಿಯಮಗಳನ್ನು ರೂಪಿಸಿ, ಅಕ್ರಮ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ.

Hot this week

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

Topics

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...

200 ವರ್ಷಗಳ ಇತಿಹಾಸವಿರುವ ಬೇಡಿದ್ದೆಲ್ಲ ಕೊಡುವ ಸಿಂಧೂರ ಗಣಪ..

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಚಬ್ಬಿ ಗ್ರಾಮದಲ್ಲಿರುವ ಚಬ್ಬಿ ಕಣಪ್ಪ ಅಥವಾ ಸಿಂಧೂರ...

ಬೆಳಗಾವಿಯಲ್ಲಿ ಬೆಚ್ಚಿಬೀಳಿಸಿದ ಡಬಲ್ ಮ*ರ್ಡರ್: ಮಾಜಿ ಯೋಧ, ಪುತ್ರಿ ಬರ್ಬರ ಹ*ತ್ಯೆ

ಬೆಳಗಾವಿ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಆವರಣದಲ್ಲೇ ಮಾಜಿ...
spot_img

Related Articles

Popular Categories

spot_img
error: Content is protected !!