spot_img
Friday, September 18, 2026
30.1 C
Hubballi

ಏಕಾಏಕಿ ನಟನೆಯಿಂದ ದೂರ ಸರಿಯಲು ಅನಂತ್ ನಾಗ್ ನಿರ್ಧಾರ! ಕಾರಣ?

ಕನ್ನಡ ಚಿತ್ರರಂಗದ ಹಿರಿಯ ನಟ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್ ಅವರು ಇನ್ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಈ ನಿರ್ಧಾರದ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸಿನಿಮಾಗಳಲ್ಲಿ ಕಥೆ ಮತ್ತು ವಿಷಯಕ್ಕಿಂತ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬುದು ಅನಂತ್ ನಾಗ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಿನಿಮಾಗಳ ಕಥೆಗಳ ಗುಣಮಟ್ಟ ಕುಸಿಯುತ್ತಿರುವುದನ್ನು ಅವರು ಬೇಸರದಿಂದಲೇ ಉಲ್ಲೇಖಿಸಿದ್ದು, ಪ್ರೇಕ್ಷಕರನ್ನು ಸೆಳೆಯುವ ಉತ್ತಮ ವಿಷಯಗಳಿಗಿಂತ ವಾಣಿಜ್ಯ ಲೆಕ್ಕಾಚಾರವೇ ಮುಖ್ಯವಾಗುತ್ತಿರುವ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾವು ಇತ್ತೀಚೆಗೆ ಒಪ್ಪಿಕೊಂಡ ಐದು ಸಿನಿಮಾಗಳು ಸೋತ ಬಳಿಕ ನಟನೆಯಿಂದ ದೂರ ಸರಿಯುವ ಆಲೋಚನೆ ಗಟ್ಟಿಯಾಯಿತು ಎಂದು ಅನಂತ್ ನಾಗ್ ಹೇಳಿದ್ದಾರೆ. ಇನ್ಮುಂದೆ ಸಮಕಾಲೀನ ನಿರ್ದೇಶಕರೊಂದಿಗೆ ಕೆಲಸ ಮಾಡುವ ಆಸಕ್ತಿ ಇಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ. ಆರೋಗ್ಯದ ಕಾರಣದಿಂದ ಅವರು ಚಿತ್ರರಂಗ ತೊರೆಯುತ್ತಿದ್ದಾರೆ ಎಂಬ ವದಂತಿಗಳಿಗೂ ಇದರಿಂದ ತೆರೆ ಬಿದ್ದಿದೆ.

ಅನಂತ್ ನಾಗ್ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿದೆ. ವಿಭಿನ್ನ ಪಾತ್ರಗಳು ಹಾಗೂ ತಮ್ಮದೇ ಆದ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿರುವ ಅವರು ಮತ್ತೆ ಉತ್ತಮ ಕಥೆಯ ಸಿನಿಮಾದೊಂದಿಗೆ ಬಣ್ಣದ ಲೋಕಕ್ಕೆ ಮರಳಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.

Hot this week

ಕೊಳೆತ ಕೊಬ್ಬರಿಯ ಅಕ್ರಮ ದಂಧೆ? ಜನರ ಆರೋಗ್ಯದ ಜೊತೆ ಚೆಲ್ಲಾಟದ ಆರೋಪ

ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ...

ಇಂದು ಈ 12 ರಾಶಿಗಳಿಗೆ ಹೇಗಿದೆ ದಿನ? ಉದ್ಯೋಗ, ಹಣ, ಕುಟುಂಬ ಮತ್ತು ವ್ಯವಹಾರದಲ್ಲಿ ಏನಿದೆ ಫಲ?

ಸೆಪ್ಟೆಂಬರ್ 18, 2026ರ ದಿನ ನಿಮ್ಮ ರಾಶಿಗೆ ಹೇಗಿರಲಿದೆ? ಉದ್ಯೋಗ, ವ್ಯವಹಾರ,...

Award For Farmer: ಕೃಷಿಯಲ್ಲಿ ನಿಮ್ಮ ಸಾಧನೆ ವಿಭಿನ್ನವಾಗಿದೆಯಾ? ಹಾಗಿದ್ರೆ ಈ ಪ್ರಶಸ್ತಿಗೆ ಇಂದೇ ಅರ್ಜಿ ಸಲ್ಲಿಸಿ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು...

Topics

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ‘! ದೂರು-ಪ್ರತಿದೂರು ದಾಖಲು

ಉತ್ತರ ಕನ್ನಡ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ...

ಗದಗ ಜಿಲ್ಲೆಯಲ್ಲಿ ಭಾವೈಕ್ಯತೆಯ ಅಲೆ! ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಮುಸ್ಲಿಂ ಯುವಕರಿಂದ ಪೂಜೆ

ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ...

ಹುಬ್ಬಳ್ಳಿಯಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ; ಸೆ.19ಕ್ಕೆ KLE ಆಸ್ಪತ್ರೆ ಉದ್ಘಾಟಿಸಲಿರುವ ಅಮಿತ್ ಶಾ!

ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸಿಕ್ಕಿದೆ. ಹುಬ್ಬಳ್ಳಿಯ...
spot_img

Related Articles

Popular Categories

spot_img
error: Content is protected !!