spot_img
Friday, September 18, 2026
30.1 C
Hubballi

ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ : ಎಲ್ಲೆಂದರಲ್ಲಿ ಗಾಡಿ ಪಾರ್ಕಿಂಗ್,

ಹುಬ್ಬಳ್ಳಿ : ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ಸ್ಟಾಪ್ ಬಳಿ ಡಾಲರ್ಸ್ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಸೆಕ್ಯೂರ್ ಆಸ್ಪತ್ರೆ ಇದ್ದು, ಈ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ.

ಬಸ್ ಸ್ಟಾಪ್ ಒಳಗಡೆ ಪಾರ್ಕಿಂಗ್‌ಗೆಂದೇ ಪ್ರತ್ಯೇಕ ಸ್ಥಳವಿದ್ದರೂ, ಚಾಲಕರು ಬಸ್ ಸ್ಟಾಪ್‌ನ ಹೊರಗಡೆ ರಸ್ತೆ ಬದಿಯಲ್ಲೇ ಗಾಡಿಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಆಸ್ಪತ್ರೆಗೆ ತೆರಳುವ ಆಂಬುಲೆನ್ಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳ ಜೀವಕ್ಕೆ ಅಪಾಯ ಎದುರಾಗುವ ಆತಂಕವಿದೆ.

ಇನ್ನು ಪಾದಚಾರಿಗಳು ಓಡಾಡುವ ಫುಟ್‌ಪಾತ್‌ನಲ್ಲೂ ತಳ್ಳುಗಾಡಿಗಳು ಮತ್ತು ಅಂಗಡಿಗಳನ್ನು ಹಾಕಲಾಗಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡುವಂತಾಗಿದೆ.

ಈ ಬಗ್ಗೆ ಟ್ರಾಫಿಕ್ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ತಕ್ಷಣ ಗಮನಹರಿಸಿ, ಅಕ್ರಮ ಪಾರ್ಕಿಂಗ್ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Hot this week

ಕೊಳೆತ ಕೊಬ್ಬರಿಯ ಅಕ್ರಮ ದಂಧೆ? ಜನರ ಆರೋಗ್ಯದ ಜೊತೆ ಚೆಲ್ಲಾಟದ ಆರೋಪ

ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ...

ಇಂದು ಈ 12 ರಾಶಿಗಳಿಗೆ ಹೇಗಿದೆ ದಿನ? ಉದ್ಯೋಗ, ಹಣ, ಕುಟುಂಬ ಮತ್ತು ವ್ಯವಹಾರದಲ್ಲಿ ಏನಿದೆ ಫಲ?

ಸೆಪ್ಟೆಂಬರ್ 18, 2026ರ ದಿನ ನಿಮ್ಮ ರಾಶಿಗೆ ಹೇಗಿರಲಿದೆ? ಉದ್ಯೋಗ, ವ್ಯವಹಾರ,...

Award For Farmer: ಕೃಷಿಯಲ್ಲಿ ನಿಮ್ಮ ಸಾಧನೆ ವಿಭಿನ್ನವಾಗಿದೆಯಾ? ಹಾಗಿದ್ರೆ ಈ ಪ್ರಶಸ್ತಿಗೆ ಇಂದೇ ಅರ್ಜಿ ಸಲ್ಲಿಸಿ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು...

Topics

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ‘! ದೂರು-ಪ್ರತಿದೂರು ದಾಖಲು

ಉತ್ತರ ಕನ್ನಡ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ...

ಗದಗ ಜಿಲ್ಲೆಯಲ್ಲಿ ಭಾವೈಕ್ಯತೆಯ ಅಲೆ! ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಮುಸ್ಲಿಂ ಯುವಕರಿಂದ ಪೂಜೆ

ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ...

ಹುಬ್ಬಳ್ಳಿಯಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ; ಸೆ.19ಕ್ಕೆ KLE ಆಸ್ಪತ್ರೆ ಉದ್ಘಾಟಿಸಲಿರುವ ಅಮಿತ್ ಶಾ!

ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸಿಕ್ಕಿದೆ. ಹುಬ್ಬಳ್ಳಿಯ...
spot_img

Related Articles

Popular Categories

spot_img
error: Content is protected !!