Shweta Menon: ಬಾಲಿವುಡ್‌ನ ನಟಿ ಶ್ವೇತಾ ಮೆನನ್ ಅವರು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರಂತಹ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಜನಪ್ರಿಯ ರೂಪದರ್ಶಿಯಾಗಿರುವ ಇವರು 1997 ರಲ್ಲಿ ‘ಪೃಥ್ವಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಷ್ಕ್, ಬಂಧನ್, ಶಿಕಾರಿ, ಅಶೋಕ, ಹಾನ್ ಮೈಂ ಭಿ ಪ್ಯಾರ್ ಕಿಯಾ, ಅಬ್ಕೆ ಬರಾಸ್, ಮಕ್ಬೂಲ್, ಹಂಗಾಮಾ, ಓಂಕಾರ, ರನ್ ಮತ್ತು ಶಿಖರ್ ಚಿತ್ರಗಳಲ್ಲಿ ಶ್ವೇತಾ ನಟಿಸಿದ್ದಾರೆ. ಅವರು ಬಾಲಿವುಡ್ ಸೇರಿದಂತೆ ಹಲವು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.. ಈ ನಟಿ ಚಿತ್ರದ ದೃಶ್ಯವೊಂದಕ್ಕೆ ಶ್ವೇತಾ ಗರ್ಭಿಣಿಯಾಗಿ.. ಕ್ಯಾಮರಾ ಮುಂದೆ ಹೆಣ್ಣು ಮಗುವಿಗೆ ಜನ್ಮ ನೀಡಿ, ಆ ಬಳಿಕ ಆಕೆ ವಿವಾದಕ್ಕೆ ಸಿಲುಕಿದ್ದಳಂತೆ..
2013ರಲ್ಲಿ ತೆರೆಕಂಡ ರ್ಭಿಣಿ ಮಹಿಳೆಯ ಜೀವನಾಧಾರಿತ ‘ಕಾಳಿಮಣ್ಣು’ ಚಿತ್ರದ ದೃಶ್ಯವೊಂದಕ್ಕೆ ಶ್ವೇತಾ ಮೆನನ್ ಗರ್ಭಿಣಿಯಾಗಿದ್ದರಂತೆ.. ಆಗ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಶ್ವೇತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಗೂ ಮುನ್ನ ಆಪರೇಷನ್ ಥಿಯೇಟರ್ ನಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಿ, ಶ್ವೇತಾ ಅವರ ಹೆರಿಗೆಯ 45 ನಿಮಿಷಗಳ ದೃಶ್ಯವನ್ನು ನಿರ್ದೇಶಕರು ಚಿತ್ರೀಕರಿಸಿದ್ದಾರೆ..




