spot_img
Friday, September 18, 2026
30.1 C
Hubballi

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ ವಿರುದ್ಧ ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ದೂರು ನೀಡಿದ್ದಾರೆ. ‘ಘೋಸ್ಟ್’ ಟ್ಯಾಟೂ ಆರ್ಟಿಸ್ಟ್ ಎಂದೇ ಪರಿಚಿತರಾಗಿರುವ ಅರ್ಜುನ್, ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಹಿಳೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ವೇಳೆ ಮಹಿಳೆ ತನ್ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಮಹಿಳೆಯ ಪರಿಚಯವಾಗಿತ್ತು ಎನ್ನಲಾಗಿದೆ. ತಾನು ಪತಿಯನ್ನು ಕಳೆದುಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಮಹಿಳೆ ಪರಿಚಯಿಸಿಕೊಂಡಿದ್ದಳು ಎನ್ನಲಾಗಿದ್ದು, ನಂತರ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಈ ನಡುವೆ ಅರ್ಜುನ್ ಕೂಡ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಮದುವೆಯಾಗುವುದಾಗಿ ಮಹಿಳೆ ನೀಡಿದ್ದ ಭರವಸೆಯನ್ನು ನಂಬಿ ಅರ್ಜುನ್ ಹಲವು ಬಾರಿ ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಮಹಿಳೆ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದರು ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 2ರಂದು ಮಹಿಳೆಗೆ ಅರ್ಜುನ್ ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆಕೆಯ ಮನೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವುದನ್ನು ಕಂಡಿದ್ದಾಗಿ ಅರ್ಜುನ್ ಹೇಳಿದ್ದಾರೆ. ಈ ವಿಚಾರವಾಗಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮಹಿಳೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಬಳಿಕ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ತಮಗೆ ಅಪಘಾತವಾಗಿದೆ ಎಂದು ವಿಡಿಯೋ ಮಾಡಿದ್ದರು ಎನ್ನಲಾಗಿದೆ. ಪ್ರಕರಣದ ವಿಚಾರ ಹೊರಬಂದರೆ ತಮ್ಮ ಗೌರವಕ್ಕೆ ಧಕ್ಕೆಯಾಗಬಹುದು ಎಂಬ ಕಾರಣದಿಂದ ಹಲ್ಲೆ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗೆ ಅರ್ಜುನ್‌ಗೆ ಸಿನಿಮಾಗಳಲ್ಲೂ ನಟಿಸುವ ಅವಕಾಶ ದೊರೆತಿತ್ತು ಎನ್ನಲಾಗಿದ್ದು, ಸದ್ಯ ಮಹಿಳೆಯಿಂದ ನಡೆದಿದೆಯೆನ್ನಲಾದ ವಂಚನೆ ಹಾಗೂ ಹಲ್ಲೆ ಆರೋಪದ ಕುರಿತು ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Hot this week

ಕೊಳೆತ ಕೊಬ್ಬರಿಯ ಅಕ್ರಮ ದಂಧೆ? ಜನರ ಆರೋಗ್ಯದ ಜೊತೆ ಚೆಲ್ಲಾಟದ ಆರೋಪ

ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ...

ಇಂದು ಈ 12 ರಾಶಿಗಳಿಗೆ ಹೇಗಿದೆ ದಿನ? ಉದ್ಯೋಗ, ಹಣ, ಕುಟುಂಬ ಮತ್ತು ವ್ಯವಹಾರದಲ್ಲಿ ಏನಿದೆ ಫಲ?

ಸೆಪ್ಟೆಂಬರ್ 18, 2026ರ ದಿನ ನಿಮ್ಮ ರಾಶಿಗೆ ಹೇಗಿರಲಿದೆ? ಉದ್ಯೋಗ, ವ್ಯವಹಾರ,...

Award For Farmer: ಕೃಷಿಯಲ್ಲಿ ನಿಮ್ಮ ಸಾಧನೆ ವಿಭಿನ್ನವಾಗಿದೆಯಾ? ಹಾಗಿದ್ರೆ ಈ ಪ್ರಶಸ್ತಿಗೆ ಇಂದೇ ಅರ್ಜಿ ಸಲ್ಲಿಸಿ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು...

Topics

ಕೊಳೆತ ಕೊಬ್ಬರಿಯ ಅಕ್ರಮ ದಂಧೆ? ಜನರ ಆರೋಗ್ಯದ ಜೊತೆ ಚೆಲ್ಲಾಟದ ಆರೋಪ

ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ...

ಇಂದು ಈ 12 ರಾಶಿಗಳಿಗೆ ಹೇಗಿದೆ ದಿನ? ಉದ್ಯೋಗ, ಹಣ, ಕುಟುಂಬ ಮತ್ತು ವ್ಯವಹಾರದಲ್ಲಿ ಏನಿದೆ ಫಲ?

ಸೆಪ್ಟೆಂಬರ್ 18, 2026ರ ದಿನ ನಿಮ್ಮ ರಾಶಿಗೆ ಹೇಗಿರಲಿದೆ? ಉದ್ಯೋಗ, ವ್ಯವಹಾರ,...

Award For Farmer: ಕೃಷಿಯಲ್ಲಿ ನಿಮ್ಮ ಸಾಧನೆ ವಿಭಿನ್ನವಾಗಿದೆಯಾ? ಹಾಗಿದ್ರೆ ಈ ಪ್ರಶಸ್ತಿಗೆ ಇಂದೇ ಅರ್ಜಿ ಸಲ್ಲಿಸಿ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು...

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ‘! ದೂರು-ಪ್ರತಿದೂರು ದಾಖಲು

ಉತ್ತರ ಕನ್ನಡ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ...

ಗದಗ ಜಿಲ್ಲೆಯಲ್ಲಿ ಭಾವೈಕ್ಯತೆಯ ಅಲೆ! ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಮುಸ್ಲಿಂ ಯುವಕರಿಂದ ಪೂಜೆ

ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ...

ಹುಬ್ಬಳ್ಳಿಯಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ; ಸೆ.19ಕ್ಕೆ KLE ಆಸ್ಪತ್ರೆ ಉದ್ಘಾಟಿಸಲಿರುವ ಅಮಿತ್ ಶಾ!

ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸಿಕ್ಕಿದೆ. ಹುಬ್ಬಳ್ಳಿಯ...
spot_img

Related Articles

Popular Categories

spot_img
error: Content is protected !!