spot_img
Thursday, September 17, 2026
28.1 C
Hubballi

ಬ್ರೇಕಪ್ ಆಯ್ತಾ? ಒಂದು ವಾರ ರಜೆ ತಗೊಳ್ಳಿ! ಕಂಪನಿಯೊಂದರ ಹೊಸ ಲೀವ್ ಪಾಲಿಸಿ ವೈರಲ್

 ಬೆಂಗಳೂರು: ಉದ್ಯೋಗಿಗಳಿಗೆ ಸಾಮಾನ್ಯವಾಗಿ ಕ್ಯಾಶುಯಲ್ ಲೀವ್, ಸಿಕ್ ಲೀವ್, ಎಮರ್ಜೆನ್ಸಿ ಲೀವ್, ಮೆಟರ್ನಿಟಿ ಹಾಗೂ ಪೆಟರ್ನಿಟಿ ಲೀವ್ ಸೇರಿದಂತೆ ಹಲವು ರೀತಿಯ ರಜೆಗಳು ಸಿಗುತ್ತವೆ. ಆದರೆ ಬೆಂಗಳೂರಿನ ಫಿನ್‌ಟೆಕ್ ಕಂಪನಿಯೊಂದು ತನ್ನ ಉದ್ಯೋಗಿಗಳ ವೈಯಕ್ತಿಕ ಬದುಕಿಗೂ ಮಹತ್ವ ನೀಡುವ ಮೂಲಕ ವಿಭಿನ್ನ ರಜೆ ನೀತಿಯನ್ನು ಜಾರಿಗೆ ತಂದಿದೆ.

ಹೌದು, ಸ್ಟಾಕ್‌ಗ್ರೋ ಕಂಪನಿಯಲ್ಲಿ ಉದ್ಯೋಗಿಗಳು ಬ್ರೇಕಪ್ ಅಥವಾ ವಿಚ್ಛೇದನದಂತಹ ವೈಯಕ್ತಿಕ ಸಮಸ್ಯೆ ಎದುರಿಸಿದಾಗ ‘ಬ್ರೇಕಪ್ ಲೀವ್’ ಪಡೆಯುವ ಅವಕಾಶವಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬ್ರೇಕಪ್‌ನಿಂದ ಉಂಟಾಗುವ ಭಾವನಾತ್ಮಕ ಒತ್ತಡದಿಂದ ಹೊರಬರಲು ಉದ್ಯೋಗಿಗಳಿಗೆ ಒಂದು ವಾರದವರೆಗೆ ರಜೆ ನೀಡಲಾಗುತ್ತದೆ ಎನ್ನಲಾಗಿದೆ. ವಿಶೇಷವೆಂದರೆ, ಈ ರಜೆ ಪಡೆಯಲು ಬ್ರೇಕಪ್ ಆಗಿದೆ ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ನೀಡುವ ಅಗತ್ಯವಿಲ್ಲ. ಅಲ್ಲದೆ, ರಜೆ ಪಡೆದಿರುವ ಬಗ್ಗೆ ಕಂಪನಿ ಯಾವುದೇ ವಿಚಾರಣೆ ನಡೆಸುವುದಿಲ್ಲ ಎನ್ನಲಾಗಿದೆ.

2024ರ ಏಪ್ರಿಲ್‌ನಲ್ಲಿ ಈ ವಿಶೇಷ ರಜೆ ನೀತಿಯನ್ನು ಪರಿಚಯಿಸಲಾಗಿದ್ದು, ಉದ್ಯೋಗಿಗಳ ಕಷ್ಟದ ಸಮಯದಲ್ಲಿ ಸಂಸ್ಥೆಯೂ ಅವರ ಬೆಂಬಲಕ್ಕೆ ನಿಲ್ಲಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಉದ್ಯೋಗಿಗಳನ್ನು ಕೇವಲ ಸಿಬ್ಬಂದಿಯಾಗಿ ನೋಡದೆ ಕುಟುಂಬದ ಸದಸ್ಯರಂತೆ ಪರಿಗಣಿಸುವುದು ಹಾಗೂ ಅವರ ವೈಯಕ್ತಿಕ ಜೀವನದ ಸಂಕಷ್ಟದ ಸಂದರ್ಭದಲ್ಲೂ ಬೆಂಬಲ ನೀಡುವುದು ಈ ನೀತಿಯ ಉದ್ದೇಶ ಎನ್ನಲಾಗಿದೆ.

ಇದೀಗ ಸ್ಟಾಕ್‌ಗ್ರೋನ ಈ ವಿಭಿನ್ನ ‘ಬ್ರೇಕಪ್ ಲೀವ್’ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಉದ್ಯೋಗಿಗಳ ಮಾನಸಿಕ ನೆಮ್ಮದಿ ಹಾಗೂ ವೈಯಕ್ತಿಕ ಬದುಕಿಗೂ ಕಂಪನಿಗಳು ಮಹತ್ವ ನೀಡುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ.

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!