ಹೊಸ ದಿನ ಹೊಸ ಅವಕಾಶಗಳನ್ನು ಹೊತ್ತು ತಂದಿದೆ. ಕೆಲವರಿಗೆ ಕೆಲಸದಲ್ಲಿ ಪ್ರಗತಿ ಕಂಡುಬಂದರೆ, ಇನ್ನು ಕೆಲವರಿಗೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದೆ. ಆತುರದ ನಿರ್ಧಾರಗಳಿಗಿಂತ ಯೋಚಿಸಿ ಹೆಜ್ಜೆ ಇಡುವುದು ಇಂದು ಒಳಿತು. ಹಾಗಾದರೇ ಇಂದಿನ ನಿಮ್ಮ ರಾಶಿಭವಿಷ್ಯ ಏನು ಹೇಳುತ್ತೆ ಎಂದು ಇಲ್ಲಿ ತಿಳಿಯಿರಿ..
ಮೇಷ: ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ಹೊಸ ಜವಾಬ್ದಾರಿ ಸಿಗಬಹುದು. ಹಣಕಾಸಿನಲ್ಲಿ ಸುಧಾರಣೆ.
ವೃಷಭ: ಕುಟುಂಬದಲ್ಲಿ ಸಂತಸದ ವಾತಾವರಣ. ವ್ಯವಹಾರದಲ್ಲಿ ಲಾಭದ ಸಾಧ್ಯತೆ. ಅನಗತ್ಯ ಖರ್ಚು ತಪ್ಪಿಸಿ.
ಮಿಥುನ: ನಿಮ್ಮ ಮಾತಿಗೆ ಇಂದು ಹೆಚ್ಚಿನ ಮೌಲ್ಯ ಸಿಗಲಿದೆ. ಉದ್ಯೋಗದಲ್ಲಿ ಹೊಸ ಅವಕಾಶ ಎದುರಾಗಬಹುದು.
ಕರ್ಕಾಟಕ: ಮನಸ್ಸಿನ ಒತ್ತಡ ಕಡಿಮೆಯಾಗಲಿದೆ. ಕುಟುಂಬದ ಬೆಂಬಲ ಸಿಗುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ.
ಸಿಂಹ: ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗುವ ದಿನ. ಅಧಿಕಾರಿಗಳಿಂದ ಸಹಕಾರ ದೊರೆಯಬಹುದು.
ಕನ್ಯಾ: ಕೆಲಸದಲ್ಲಿ ಸಣ್ಣ ಅಡೆತಡೆಗಳು ಎದುರಾಗಬಹುದು. ತಾಳ್ಮೆಯಿಂದ ಮುಂದುವರಿದರೆ ಯಶಸ್ಸು ಖಚಿತ.
ತುಲಾ: ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ ಸಿಗಬಹುದು. ಸ್ನೇಹಿತರ ಸಹಕಾರದಿಂದ ಕೆಲಸ ಸುಲಭವಾಗಲಿದೆ.
ವೃಶ್ಚಿಕ: ಹೊಸ ಯೋಜನೆ ಆರಂಭಿಸಲು ಅನುಕೂಲಕರ ದಿನ. ಆತುರದ ನಿರ್ಧಾರಗಳಿಂದ ದೂರವಿರಿ.
ಧನು: ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರಗತಿ. ದೂರ ಪ್ರಯಾಣದ ಸಾಧ್ಯತೆ ಇದೆ.
ಮಕರ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಿರಿಯರಿಂದ ಮೆಚ್ಚುಗೆ ಪಡೆಯುವಿರಿ.
ಕುಂಭ: ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಸಹಾಯ ಮಾಡಲಿವೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಮೀನ: ಕುಟುಂಬದಲ್ಲಿ ನೆಮ್ಮದಿ. ಬಹುದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳಬಹುದು. ದಿನವು ಸಂತಸದಿಂದ ಕೂಡಿರಲಿದೆ.




