spot_img
Monday, July 20, 2026
27.4 C
Hubballi

ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ಸ್ಪರ್ಧಿಗಳ ತಾಳ್ಮೆಯ ಕಟ್ಟೆ..!

ಬಿಗ್ ಬಾಸ್ ಕನ್ನಡ 12ರಲ್ಲಿ ಸತೀಶ್ ಅವರ ವಿಚಿತ್ರ ನಡವಳಿಕೆ ಮನೆ ಮಂದಿಗೆ ಕೋಪ ತಂದಿದೆ. ಆರು ಗಂಟೆ ಸ್ನಾನ ಮಾಡಿ ಸ್ಪರ್ಧಿಗಳ ತಾಳ್ಮೆಯ ಕಟ್ಟೆ ಒಡೆಸಿದ್ದಾರೆ. ಚಂದ್ರಪ್ರಭ ಅವರಿಗೆ ಕಿರಿಕಿರಿಯಾಗಿ ಗಾಜಿನ ಲೋಟ ಒಡೆದಿದ್ದಾರೆ. ತಮ್ಮ ಐಷಾರಾಮಿ ಜೀವನವನ್ನು ಬಿಗ್ ಬಾಸ್ ಮನೆಯಲ್ಲೂ ಮುಂದುವರೆಸುತ್ತಿರುವ ಸತೀಶ್ ಅವರ ಹಠಮಾರಿ ವರ್ತನೆಗೆ ಧನುಷ್ ಗೌಡ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಚಿತ್ರ ವಿಚಿತ್ರ ಸ್ಪರ್ಧಿಗಳು ಆಗಮಿಸಿದ್ದಾರೆ. ಅನೇಕ ಸ್ಪರ್ಧಿಗಳು ತಮ್ಮ ಪ್ರತಿಷ್ಠೆ ಮುಖ್ಯ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಸತೀಶ್ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಗಂಟೆ ಸ್ನಾನ ಮಾಡಿದ್ದಾರೆ! ಇದನ್ನು ನೋಡಿ ಮನೆ ಮಂದಿ ಶಾಕ್​ಗೆ ಒಳಗಾಗಿದ್ದಾರೆ. ಅನೇಕರ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ.

ಮನೆಯಲ್ಲಿ ನಡೆದಂತೆ ಬಿಗ್ ಬಾಸ್ ಮನೆಯಲ್ಲೂ ನಡೆದುಕೊಳ್ಳುತ್ತೇನೆ ಎಂದರೆ ಅದು ಸಾಧ್ಯವೇ ಇಲ್ಲ. ಇಲ್ಲಿ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹಲವು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ. ಆದರೆ, ಸತೀಶ್ ಮಾತ್ರ ಇದ್ಯಾವುದಕ್ಕೂ ಸಿದ್ಧರಿಲ್ಲ.

ಸತೀಶ್ ಶ್ರೀಮಂತ ಜೀವನ ನಡೆಸಿಕೊಂಡು ಬಂದವರು. ಅವರು ಮನೆಯಲ್ಲಿದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಈಗ ದೊಡ್ಮನೆಗೆ ಅವರಿಗೆ ಕಷ್ಟ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗುತ್ತಿಲ್ಲ. ಅಲ್ಲಿಯೂ ಅವರು ತಮಗೆ ಬೇಕಾದಂತೆ ವಾಸ ಮಾಡುತ್ತಿದ್ದಾರೆ.

ಸತೀಶ್ ಅವರು ಬಿಗ್ ಬಾಸ್ ಮನೆಯಲ್ಲಿ 4-6 ತಾಸುಗಳಷ್ಟು ಸ್ನಾನ ಮಾಡಿದ್ದಾರೆ. ಅವರ ಜೋಡಿ ಚಂದ್ರಪ್ರಭ ಅವರು ಬಾತ್​ರೂಂನಲ್ಲಿ ಕುಳಿತು ಕುಳಿತು ಸುಸ್ತಾಗಿದ್ದಾರೆ. ಇದನ್ನು ಅವರಿಂದ ತಡೆದುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಈ ವಿಚಾರದಲ್ಲಿ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಬಾಯಾರಿಕೆ ಆದರೂ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡು  ಗಾಜಿನ ಲೋಟವನ್ನು ಬೀಸಿ ನೆಲಕ್ಕೆ ಎಸೆದಿದ್ದಾರೆ. ಇದರಿಂದ ಗಾಜಿನ ಲೋಟ ಒಡೆದು ಚೂರಾಗಿದೆ.

ಸತೀಶ್ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ಮನೆಯ ಅನೇಕರು ಹೇಳಿದ್ದಾರೆ. ಆದರೆ, ಸತೀಶ್ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲೇ ಇಲ್ಲ. ‘ನಾನು ಇರೋದೇ ಹೀಗೆ. ನಾನು ಹೀಗೆಯೇ ನಡೆದುಕೊಳ್ಳೋದು’ ಎಂದು ಆವಾಜ್ ಹಾಕಿದ್ದಾರೆ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಧನುಷ್ ಗೌಡ ಜಗಳಕ್ಕೆ ಮುಂದಾಗಿದ್ದಾರೆ. ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಈ ಮಾತಿನ ಚಕಮಕಿ ಸಾಗಿದೆ.

Hot this week

Hubli News: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ…!

Hubli: ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಯಲ್ಲಿ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ,...

ನವಲಗುಂದ ಟ್ಯಾಕ್ಸಿ ಸಂಘದ ಪ್ರತಿಭಟನೆಗೆ ದೇವರಾಜ ದಾಡಿಬಾವಿ ಬೆಂಬಲ..!

ನವಲಗುಂದ, ಜುಲೈ 6: ಟ್ಯಾಕ್ಸಿ ನಿಲ್ದಾಣಕ್ಕೆ ಶಾಶ್ವತ ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹಿಸಿ...

ಹಾವೇರಿಯಲ್ಲಿ ಮೋಡ ಬಿತ್ತನೆಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಚಾಲನೆ

Haveri:ರಾಜ್ಯದಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಹಾವೇರಿ...

ನಾಳೆ ಅಕ್ಕಿ ಆಲೂರು ಗ್ರಾಮದ ಮಠದ ದೇವಾಲಯ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಗ್ರಾಮದ ಶ್ರೀಶೈಲ ಶಾಖಾ...

Topics

ಹುಬ್ಬಳ್ಳಿಯ income tax ಕಚೇರಿ ಬಳಿ ಭೀಕರ ರಸ್ತೆ ಅಪಘಾತ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಸಾವು..!

ಹುಬ್ಬಳ್ಳಿ:ನಗರದ incometax ಕಚೇರಿಯ ಮುಂದೆ ಡೀಸೆಲ್ ಟ್ಯಾಂಕರ್ ಹಾಗೂ ಸ್ಕೂಟಿ ನಡುವೆ...

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...
spot_img

Related Articles

Popular Categories

spot_img
error: Content is protected !!