spot_img
Thursday, September 17, 2026
24.1 C
Hubballi

ರಾಯಪುರ ಇಸ್ಕಾನ್ ನಲ್ಲಿ ಅದ್ಧೂರಿಯಾಗಿ ನಡೆದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!

ಹುಬ್ಬಳ್ಳಿ-ಧಾರವಾಡದ ರಾಯಪುರದಲ್ಲಿರುವ ಉತ್ತರ ಕರ್ನಾಟಕದ ಅತಿದೊಡ್ಡ ಇಸ್ಕಾನ್ ದೇವಸ್ಥಾನದಲ್ಲಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ.. 

ನಿರ್ಮಾಣ ಹಂತದಲ್ಲಿರುವ ಈ ಭವ್ಯ ಮಂದಿರದಲ್ಲಿ ಕಳೆದ ಬಾರಿ ಶ್ರೀ ಕೃಷ್ಣ-ಬಲರಾಮರ ಮೂರ್ತಿಗಳ ಪ್ರತಿಷ್ಠಾಪನೆಯಾಗಿತ್ತು. ಆದರೆ ಈ ಬಾರಿ ವಿಶೇಷವೆಂದರೆ, ಶ್ರೀ ರಾಧಾ-ಕೃಷ್ಣ, ನಿತಾಯಿ-ಗೌರಾಂಗ, ಕೃಷ್ಣ-ಬಲರಾಮ ಹಾಗೂ ನರಸಿಂಹ ದೇವರ ಮೂರ್ತಿಗಳು ಒಟ್ಟಿಗೆ ಪ್ರತಿಷ್ಠಾಪನೆಯಾಗಿದ್ದು, ಇದರಿಂದಾಗಿ ಈ ಬಾರಿಯ ಆಚರಣೆ ಇನ್ನಷ್ಟು ದೈವಿಕ ಕಳೆ ಪಡೆದುಕೊಂಡಿತ್ತು..

ಈ ಬಾರಿ 20 ಸಾವಿರ ಭಕ್ತರು ಆಗಮಿಸುವ ಗುರಿ ಹೊಂದಲಾಗಿತ್ತು, ಅದರಂತೆ 12 ಸಾವಿರಕ್ಕೂ ಹೆಚ್ಚು ಭಕ್ತರು ಜಪ-ಸಂಕೀರ್ತನೆಗೆ ಮುಂಚಿತವಾಗಿಯೇ ಹೆಸರು ನೋಂದಾಯಿಸಿದ್ದರು.  

ದೇವಸ್ಥಾನವನ್ನು ವಿದ್ಯುತ್ ದೀಪಗಳು ಮತ್ತು ಹೂವುಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿದೆ. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳು, ನೃತ್ಯ, ಸಂಗೀತ ಸ್ಪರ್ಧೆಗಳು, ರಾತ್ರಿ 12 ಗಂಟೆಯವರೆಗೆ ವಿಶೇಷ ಭಜನಾ ಕಾರ್ಯಕ್ರಮ ನಡೆದವು. ಆಗಮಿಸಿದ ಎಲ್ಲಾ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.. 

ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕೃಷ್ಣ ಭಕ್ತರು ಆಗಮಿಸಿದ್ದು, ಇಡೀ ರಾಯಪುರ ಕೃಷ್ಣಮಯವಾಗಿತ್ತು.

ಇನ್ನು ದೇವಸ್ಥಾನ ನಿರ್ಮಾಣಕ್ಕೆ ಅನೇಕ ಭಕ್ತರು ಟ್ರಸ್ಟ್ ಗೆ ನೆರವು ನೀಡುತ್ತಿದ್ದು, ಪೂರ್ಣಗೊಂಡ ಬಳಿಕ ಇದು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆ.

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!