ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 187ನೇ ವಿಶ್ವ ಛಾಯಾಗ್ರಹಣ ದಿನಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರು, ಸಮಾಜ ಸೇವಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಮೂರುಸಾವಿರ ಮಠದ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಕ್ಕೆ ಚಾಲನೆ ನೀಡಿದ್ದು, ಇದೇ ಸಂದರ್ಭದಲ್ಲಿ ಛಾಯಾಗ್ರಾಹಕರಾಗಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಾಧಕರಿಗೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಪ್ರಶಸ್ತಿ ಪ್ರಧಾನ ಮಾಡಿದರು. ಅಲ್ಲದೇ ಸಾಧಕರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಛಾಯಾಗ್ರಾಹಕ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ಸ್ವರ್ಣ ಗ್ರೂಪ್ ಮಾಲೀಕರು ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಬಗ್ಗೆ ಅಭಿನಂದನೆ ಸಲ್ಲಿಸಿದರು.
ಇನ್ನೂ ವಿಶ್ವ ಛಾಯಾಗ್ರಹಣ ದಿನಕ್ಕೆ ಆಗಮಿಸಿದ ಡಾ.ವಿ.ಎಸ್.ವಿ ಪ್ರಸಾದ್ ಅವರಿಗೆ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಪೋಟೋ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದು, ವಿಶ್ವ ಛಾಯಾಗ್ರಹಣ ದಿನದ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆದಿದೆ.
ಒಟ್ಟಿನಲ್ಲಿ 187ನೇ ವಿಶ್ವ ಛಾಯಾಗ್ರಹಣ ದಿನವೂ ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ, ಸುಮಾರು ದಶಕಗಳ ಕಾಲ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಿರುವುದು ವಿಶೇಷವಾಗಿದೆ.




