spot_img
Thursday, September 17, 2026
24.1 C
Hubballi

ಹುಬ್ಬಳ್ಳಿ ಮಹಾನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಬೃಹತ್ ರಕ್ತದಾನ ಶಿಬಿರ..!

ಹುಬ್ಬಳ್ಳಿ:

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹುಬ್ಬಳ್ಳಿ ಮಹಾನಗರದಿಂದ ನವೆಂಬರ್ 9 ರಂದು ಬೃಹತ್ ರಕ್ತದಾನ ಶಿಬಿರವನ್ನು ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಭವಾನಿ ನಗರದ ರಾಯರಮಠದ ಶ್ರೀಸುಜಿಯೀಂದ್ರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉತ್ತರ ಪ್ರಾಂತ ಉಪಾಧ್ಯಕ್ಷರಾದ ಗೋವರ್ಧನರಾವ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 41 ವರ್ಷಗಳಿಂದ ಭಜರಂಗದಳವು ಸೇವಾ, ಸುರಕ್ಷಾ, ಸಂಸ್ಕಾರದೊಂದಿಗೆ ಕಾರ್ಯ ಮಾಡುತ್ತಿದೆ. ಇದಲ್ಲದೇ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಜೊತೆಗೆ ಮತಾಂತರ, ಲವ್ ಜಿಹಾದ್, ಗೋ ರಕ್ಷಣೆ ವಿಷಯವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇದೀಗ ಕೇಂದ್ರ ಸರ್ಕಾರ ಆರೋಗ್ಯದ ಬಗ್ಗೆ ಯುವಕ-ಯುವತಿಯರಲ್ಲಿ ಜಾಗೃತಿ ಮೂಡಿಸಲು ನಶೆಮುಕ್ತ ಭಾರತ ಕಾರ್ಯಕ್ರಮ ನಡೆಸುತ್ತಿದೆ. ಇದಕ್ಕೆ ಬೆಂಬಲವಾಗಿ ಬಜರಂಗದಳವು ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಆರೋಗ್ಯಕ್ಕಾಗಿ ಓಟ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಭಾಷಣಗಳು, ಆರೋಗ್ಯ ಶಿಬಿರಗಳನ್ನು ನಡೆಸಲಿದೆ ಎಂದರು.

1990 ರಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಮಡಿದ ಕರಸೇವಕರ ನೆನಪಿಗಾಗಿ ಬಲಿದಾನ ದಿವಸ ಮತ್ತು ಋಷಿ ದಧೀಚಿಯು ದೇವತೆಗಳ ರಕ್ಷಣೆಗಾಗಿ ರಾಕ್ಷಸರ ಸಂಹಾರಕ್ಕಾಗಿ ತನ್ನ ಬೆನ್ನು ಮೂಳೆಯನ್ನೇ ದಾನವಾಗಿ ನೀಡಿದ್ದಾರೆ. ಈ ಕಾರಣಕ್ಕಾಗಿ ಪ್ರತಿವರ್ಷ ದಧೀಚಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ವರ್ಷವೂ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನ.9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದತ್ತಮೂರ್ತಿ ಕುಲಕರ್ಣಿ, ಚೇತನ್ ರಾವ್, ಪ್ರಶಾಂತ ನರಗುಂದ, ರಘು ಯಲ್ಲಕ್ಕನವರ ಇದ್ದರು.

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!